Wednesday, October 16, 2013

ಹೆಸರು ತಂದ ಪಚೀತಿ

ನನ್ನ ಅಪ್ಪನದು ಸಾಗರದಲ್ಲಿ ಒಂದು ಅಂಗಡಿ ಇದೆ . ಸುತ್ತಮುತ್ತಲಿನ ಹಳ್ಳಿಯವರೆಲ್ಲ ಸಾಮಾನ್ಯವಾಗಿ ನಮ್ಮ ಅಂಗಡಿಯಲ್ಲಿಯೇ ಸಾಮಾನು ಖರೀದಿಸುವುದು ಅದಕ್ಕಿಂತ ಹೆಚ್ಚಾಗಿ ತುಂಬಾ ಜನ ನಮ್ಮ ಅಂಗಡಿಯನ್ನು ವಿಳಾಸ ಕೇಳಲು ಅಥವಾ ಬಸ್ ಬಗ್ಗೆ ವಿಚಾರಿಸಲು ಮಾಹಿತಿ ಕೇಂದ್ರ ಆಗಿ ಬಳಸುತ್ತಾರೆ . ಇಂತಹ  ಒಂದು ವಿಳಾಸ ಕೇಳಿ ಬಂದ ಪ್ರಸಂಗವೇ "ಹೆಸರು ತಂದ ಪಚೀತಿ ". 

ಒಂದು ದಿನ ಎಂದಿನಂತೆ ಅಪ್ಪ ಊಟಕ್ಕೆ ಹೊರಡುವ ಸಮಯ. ಆಗ ಒಬ್ಬ ವ್ಯಕ್ತಿ(ಹುಡುಗ) ಬಂದು ನಾನು ಅರವಿಂದನ್ನ ಫ್ರೆಂಡ್ ಅವರ ಮನೆಗೆ ಹೋಗಬೇಕಿತ್ತು ಇಲ್ಲಿ ಕೇಳಿದರೆ ಹೇಳುತಾರೆ ಅಂದಿದ್ದ ಎಂದು ಅಪ್ಪನ ಕೇಳಿದ .ಅಷ್ಟಕ್ಕೆ ಅಪ್ಪ  ಸರಿ ಬನ್ನಿ ಹೋಗೋಣ ಅವನು ನನ್ನ ಮಗನೆ ಎಂದು ಸೀದ ಮನೆಗೆ ಕರೆದುಕೊಂಡು ಬಂದ . ಆಗ ಅಣ್ಣ ಮನೆಯಲಿರಲಿಲ್ಲ . ಹೇಗೂ ಊಟದ ಸಮಯವಾದ್ದರಿಂದ ಅಮ್ಮ ಊಟ ಮುಗಿಸಿ ಅವನು ಬರುವುದು ಸ್ವಲ್ಪ ಸಮಯವಾಗುತ್ತದೆ ಹೇಳಿ ಊಟ ಬಡಿಸಿದಳು . ನಂತರ ವಾಡಿಕೆಯಂತೆ  ಮಲಗಲು ಅಪ್ಪ ಹಾಸಿ ಕೊಟ್ಟ  . ಅದರೂ ಅವನಿಗೆ ಗೆಳಯನ ನೋಡುವ ತವಕ , ಹಾಗಾಗಿ ಮಲಗಲಿಲ್ಲ.  ಅವನು  ಮಲಗದೇ ಅಪ್ಪ ಸಹ ಮಲಗುವ ಹಾಗಿಲ್ಲ ( ನಮ್ಮ ಕಡೆ ಅತಿಥಿ ಸತ್ಕಾರಕ್ಕೆ ತುಂಬ ಪ್ರಾಮುಖ್ಯತೆ ಇದೆ ). ಅದ್ದರಿಂದ ಅನಿವಾರ್ಯವಾಗಿ ಅಪ್ಪ ಅವನ ಹತ್ತಿರ ಮಾತು ಆಡುತ್ತ ಕುಳಿತ . ಸರಿ ಹೀಗೆ  ಮಾತಾಡುತ್ತ ಕುಳಿತಿರಬೇಕಾದರೆ ಅಣ್ಣ ಮನೆಗೆ ಬಂದ . ಬಂದವನು ಗೆಳೆಯನ ಮಾತನಾಡಿಸುವುದು ಹಾಗಿರಲಿ ಒಂದು ನಗುವನ್ನು ಸಹ ಬೀರದೆ ಸೀದಾ ಒಳಗೆ ಬಂದ.ಗಳೆಯನನ್ನು ನೋಡಲು  ಅಷ್ಟು  ಕಾತುರನಗಿದ್ದ ಅ ವ್ಯಕ್ತಿ ಸಹ ಯಾವುದೇ ತರನಾದ ಅಭಿವ್ಯಕ್ತಿ ಪ್ರಕಟಿಸಲಿಲ್ಲ. ನಮಗೆಲ್ಲ ಒಳಗೊಳಗೆ ಏನೋ ಒಂಥರಾ ,ಇವರು  ಯಾಕೆ ಹೀಗೆ ಮಾಡುತ್ತಿದಾರೆಂದು . ಅದರೂ ಯಾರು ಏನು ಕೇಳಲಿಲ್ಲ . ಸರಿ ಹೀಗೆ ಒಳಗೆ ಬಂದವನೇ ಕೈಕಾಲು ತೊಳೆದು ಊಟಕ್ಕೆ ಕುಳಿತ . ಅಮ್ಮ ಊಟ ಬಡಿಸುವಾಗ ಅವನೇ ಅಲ್ಲಿ ಹೊರಗೆ ಕುಳಿತ್ತಿದವರು ಯಾರು ಎಂದು  ಕೇಳಿದ . ಅಮ್ಮನಿಗೆ ಫುಲ್ ಶಾಕ್ !!!!. ಅವನು ನಿನ್ನ ಗೆಳೆಯನಂತೆ ಅಂಗಡಿಗೆ ಬಂದು ಕೇಳಿದನಂತೆ ಅದಕಾಗಿ ಅಪ್ಪ ಮನೆಗೆ ಕರೆದುಕೊಂಡು ಬಂದರು ಹೇಳಿದಳು .ಈಗ ಶಾಕ್ ಅಣ್ಣನಿಗೆ  !!!!!. ನಂತರ ಇಲ್ಲಿ ಏನೋ ಎಡವಟ್ಟಾಗಿದೆ ಎಂಬುದು ಖಾತ್ರಿ ಆಯಿತು . ನಂತರ ಅಪ್ಪನನ್ನು ಒಳಗೆ ಕರೆದು ಅವ  ಏನು ಕೇಳಿದ ನೀನು  ಯಾಕೆ ಇಲ್ಲಿಗೆ ಕರೆದುಕೊಂಡು ಬಂದೆ ಅವನ ಪರಿಚಯ ಅಣ್ಣನಿಗಿಲ್ಲ ಹೇಳಿದಾಗ ನೀವು ಊಹಿಸಿದಂತೆ ಶೋಕ್ಕ್ನ ಸರದಿ ಅಪ್ಪನದು!!!!. ಅಪ್ಪನ ಗಡಿಬಿಡಿಯ ಪರಿಚಯವಿದ್ದ ನಾವು ಈಗ  ಎಡವಿದ್ದೆಲ್ಲಿ ಎಂದು ನೋಡಲೆಬೇಕಲ್ಲ ,ಆದುದರಿಂದ  ಅತಿಥಿಯನ್ನೇ ಕೇಳದೆ ಬೇರೆ ದಾರಿ ಇಲ್ಲ . ಸರಿ ಅವನನ್ನೇ ವಿಚಾರಿಸುವ ಎಂದು ಹೊರಗೆ ಬಂದಾಯಿತು. ಅವನಿಂದ ವಿಷಯ ತಿಳಿದಾಗ ನಗುವ ಸರದಿ ಎಲ್ಲರದಾಯಿತು !!!!. ಅವನು ಕೇಳಿದ್ದು ಹತ್ತಿರದ ಹಳ್ಳಿಯ ಅರವಿಂದನನ್ನು (ಅವರು ನಮ್ಮ ಅಂಗಡಿ ಗಿರಾಕಿಯೇ ಆಗಿದ್ದರಿಂದ ಮೇಲೆ ಹೇಳಿದಂತೆ ನಮ್ಮ ಅಂಗಡಿಯಲ್ಲಿ ವಿಳಾಸ ಮತ್ತು ಬಸ್  ಬಗ್ಗೆ ಕೇಳಲು ಹೇಳಿದ್ದರು ). ನಮ್ಮ ಅಪ್ಪ  ಗಡಿಬಿಡಿಯಿಂದ  ಪೂರ್ತಿ ಕೇಳದೆ ಹೆಸರನ್ನು ಹೇಳಿದ  ತಕ್ಷಣ ನನ್ನ ಮಗನ ಗೆಳೆಯನೆಂದೆ ತೀರ್ಮಾನಿಸಿ ಅವನನ್ನು ನಮ್ಮ ಮನೆಗೆ ಕರೆದುಕೊಂಡು ಬಂದಿದ್ದರು . !!!!!

Monday, October 14, 2013

ನನ್ನ ಅಪ್ಪ: (ರೆಡಿಮೇಡ್ ಬೈಂಡ್)

ನನ್ನ ಹಾಗು ಅಪ್ಪನ ಸಂಬಂಧ ಒಂದು ಆತ್ಮೀಯ ಮಿತ್ರ ಸಂಬಂಧ. ಮೊದಲಿನಿಂದಲೂ ಅಪ್ಪನಿಗೆ ಓದು ಬರಹ ಅಂದರೆ ಬಹಳ ಪ್ರೀತಿ. ಆದರೆ ಮನೆ ಪರಿಸ್ಥಿತಿ ಸರಿ ಇಲ್ಲದ ಕಾರಣ ಅವರಿಗೆ ಹೆಚ್ಚು ಓದಲಾಗಲಿಲ್ಲ .
ಅದರೂ ಖಾಸಗಿಯಲ್ಲಿಯೇ ಕಲಿತು ಸಿಕ್ಕಿದ ಕಾಲೇಜ್ ಪ್ರಾಧ್ಯಾಪಕ ಹುದ್ದೆಯನ್ನು ಸಹ ಮನೆಯನ್ನು ಮುನ್ನೆಡೆಸುವ ಸಲುವಾಗಿ ಬಿಟ್ಟಂತ ಮಹಾಪುರುಷ . ಇಂತಹ ಅಪ್ಪ ನಾನು ಶಾಲೆಗೆ ಸೇರಿದಾಗ ಪಟ್ಟ ಸಂತೋಷ ಅಷ್ಟಿಷ್ಟು ಅಲ್ಲ. ನನ್ನ ಜೊತೆ ಶಾಲೆಗೆ ಬಂದು ಒಂದು ವಾರ ನನ್ನ ಜೊತೆಗೆ ಕುಳಿತು ನನಗೆ ಶಾಲೆಗೆ ಹೋಗಲು ಅಭ್ಯಾಸ ಮಾಡಿಸಿದಂಥ ಪುಣ್ಯಾತ್ಮ . ಹೀಗೆ ನಾನು ಶಾಲೆಗೆ ಹೋಗಲು ಪ್ರಾರಂಬಿಸಿದ ನಂತರ ನನ್ನ ಪಾಟಿಚೀಲ ಪುಸ್ತಕ ಪೆನ್ ಪೆನ್ಸಿಲ್,ಗ್  ಹೀಗೆ ಎಲ್ಲವನ್ನೂ ತಂದು ಕೊಟ್ಟು ನನ್ನ ವಿಧ್ಯಾಭ್ಯಾಸಕ್ಕೆ ಎಲ್ಲೂ ಚ್ಯುತಿ ಬರದಂತೆ ಇಂಜಿನಿಯರಿಂಗ್ ತನಕ ನೋಡಿಕೊಂಡ ಅಪ್ಪನ ಬಗ್ಗೆ ನನಗೆ ಎಷ್ಟು ಹೇಳಿದರು ಕಮ್ಮಿಯೆ.. 
ಇಂತಹ ಅಪ್ಪ ಬಹಳ ಕ್ರಿಯಾತ್ಮಕ ವ್ಯಕ್ತಿ  ಕೂಡ . ಏನೇ ಕೆಲಸ ಮಾಡುವಾಗಲು ಏನಾದರೂ ಹೊಸತನ್ನು ಹುಡುಕುವ  ವಿಜ್ನ್ಯಾನಿ .  ಒಮ್ಮೆ ನನಗೆ ಪುಸ್ತಕಕ್ಕೆ ಬೈಂಡ್ ಹಾಕಲು ಮಾಡಿದ ಹೊಸ ಪ್ರಯೋಗವೇ  ರೆಡಿಮೇಡ್ ಬೈಂಡ್ . ಆಗ ನಾನು ೩ ನೆ ತರಗತಿಯಲ್ಲಿದ್ದೆ . ನಾವು ಇದ್ದಿದ್ದು ಹಳ್ಳಿಯಲ್ಲಿ ,ಹಾಗು ಎಲ್ಲಿ ಓದಿದರೂ ಬುದ್ದಿ ಇರುವವರು ಮುಂದೆ ಬಂದೆ ಬರುತ್ತಾರೆಂಬ ನಂಬಿಕೆ ಮತ್ತು ಪೇಟೆಗೆ ದಿನ ಕರೆದುಕೊಂಡು ಹೋಗಿ ಬರುವ ಅನನುಕೂಲತೆ ಇವೆಲ್ಲದರಿಂದ  ನಾನು ಓದಿದ್ದು ಸರ್ಕಾರಿ ಶಾಲೆಯಲ್ಲಿ . ಅ ವರ್ಷದಿಂದ ನಮಗೆ ಬೇರೆ ಬೇರೆ ವಿಷಯಗಳ ಪುಸ್ತಕಗಳು ಅಲ್ಲಿವರೆಗೂ ಬರಿ ಒಂದೇ ಪುಸ್ತಕ (ಈಗಿನವರಿಗೆ ಕೇಳಿದರೆ ಬರಿ ಆಶ್ಚರ್ಯವಲ್ಲ ಪರಮಾಶ್ಚರ್ಯವೇ ಆಗುತ್ತದೆ,ನನ್ನ ಅಣ್ಣ ನ ಮಗನಿಗೆ L Kg  ಗೆ ೧೦ ಪುಸ್ತಕ!!! )ನನಗೋ ಓದುವ ಹುಚ್ಚು ಬಹಳ ಇದ್ದ ಕಾರಣ ತುಂಬಾ ಸಂತೋಷ ,ಜೊತೆಗೆ ಭಯ ( ಅ ವರ್ಷದಿಂದಷ್ಟೇ ನಮಿಗೆ ಪರೀಕ್ಷೆ ಅಲ್ಲಿವರೆಗೂ ಸುಮ್ಮನೆ ಶಾಲೆ ಗೆ ಹೋಗುವದು ಬರುವದು) . ಅದರೂ ಈಗ  ನನಗು ಪೇಟೆ ಶಾಲೆಯವರಂತೆ ತುಂಬ ಪುಸ್ತಕ ಇದೆ ಎಂಬ ಹೆಮ್ಮೆ. ಈಗ ಶುರು ನಮ್ಮಪ್ಪನ ಕೆಲಸ. ಪುಸ್ತಕ ತರುವುದು ನೋಟ್ಬುಕ್ ತರುವುದು (ಅ ವರ್ಷದಿಂದನೆ ನಮಿಗೆ ನೋಟ್ಬುಕ್ ನಲ್ಲಿ ಬರೆಯಲು ಪ್ರಾರಂಭ ಅಲ್ಲಿವರೆಗೂ ಬರಿ ಸ್ಲೇಟು ). ಅದಿಕಾಗಿ ಶಾಲೆ ಪ್ರಾರಂಭ ಆಗುವ ಮೊದಲೆ ಅಪ್ಪ ನನ್ನ ಒಬ್ಬರು ಗುರುಗಳನ್ನು ಕೇಳಿಕೊಂಡು ಯಾವ ಯಾವ ಪುಸ್ತಕ ಎಷ್ಟು ನೋಟ್ಬುಕ್ ಬೇಕು ಎಲ್ಲ ತಂದರು .  ಜ಼ೊತೆಗೆ ಆಗ ಮೌಗ್ಲಿ ಬೈಂಡ್ ಬಹಳ ಖ್ಯಾತಿ ಪಡೆದಿತ್ತು ಎಂಬುದನ್ನು ನನ್ನ ಪೇಟೆ ಮಿತ್ರರಿಂದ ತಿಳಿದುಕೊಂಡಿದ್ದೆ  . ಅದಕಾಗಿ  ನಾನು ಕೂಡ ನನಗು ಅದೇ ಬೇಕು ಹೇಳಿ ಅದನ್ನೂ ತರಿಸಿಕೊಂಡೆ . ಸರಿ ಪುಸ್ತಕ,ನೋಟ್ಬುಕ್ ಬೈಂಡ್ ಎಲ್ಲ ಬಂದಾಯಿತು ಈಗ  ಪುಸ್ತಕಕ್ಕೆ  ಬೈಂಡ್ ಮಾಡುವ ಕೆಲಸ . ಅಲ್ಲಿರುವ ಬಂಡಿಗಟ್ಟಲೆ ಪುಸ್ತಕ ನೋಟ್ಬುಕ್ ನೋಡಿ ,ನಾನು ಮೊದಲೇ ಹೇಳಿದಂತೆ ನಮ್ಮಪ್ಪನ ಕ್ರಿಯಾತ್ಮಕ ತಲೆಗೆ ಹೊಸ ಐಡಿಯಾ ಹೊಳೆಯಿತು . !!! . ಎಲ್ಲದನ್ನು ಒಂದೊಂದಾಗೆ ಮಾಡುತ್ತ ಕುಳಿತರೆ ದಿನವೆಲ್ಲ ಇದಕ್ಕೆ ಬೇಕು ಎಂದು ಯೋಚಿಸಿ ರೆಡಿಮೇಡ್ ಬೈಂಡ್ ಮಾಡುವ ಅಭಿಪ್ರಾಯಕ್ಕೆ ಬಂದರು . ಅದೇನೆಂದರೆ ಒಂದು ಪುಸ್ತಕ ತೆಗೆದುಕೊಂಡು ಅದರ ಅಳತೆಗೆ ಸರಿ ಹೊಂದುವಂತೆ ಎಲ್ಲ ಬೈಂಡ್ ಗಳನ್ನೂ  ಒಟ್ಟಿಗೆ ಇಟ್ಟು  ಕತ್ತರಿಸುವುದು . ನಂತರ ಸಣ್ಣ ಮಾಡುವುದಿದ್ದರೆ  ಮಾಡುವುದು  .ಇದು ನಿಜವಾಗಲು ಒಳ್ಳೆ ಐಡಿಯಾ ವೆ . ಸೊ ಒಂದು ಪುಸ್ತಕ ತೆಗೆದುಕೊಂಡು ಅದರ ಅಳತೆಗೆ ಎಲ್ಲ ಬೈಂಡ್ ಗಳನ್ನೂ ಕತ್ತರಿಸಿ ಅಪ್ಪನ ರೆಡಿಮೇಡ್ ಬೈಂಡ್ ತಯಾರಾಯಿತು . ಈಗ ಎಲ್ಲ ಪುಸ್ಥಕಕ್ಕು ಹಾಕುವ ಸರದಿ . ಸೊ ಅಪ್ಪ ಇನ್ನೊಂದು ಪುಸ್ತಕ ತೆಗೆದುಕೊಂಡರು .ನಂತರ ಜೋರಾಗಿ ನಗಲು ಪ್ರಾರಂಬಿಸಿದರು. ನನಗೆ ಏನು ಅರ್ಥವಾಗದೇ ಕಣ್ಣು ಕಣ್ಣು ಬಿಟ್ಟು ನೋಡುತಿದ್ದೆ.   ನಂತರ ತಿಳಿಯಿತು ಅವರ ನಗುವಿಗೆ ಕಾರಣ . ಅವರು ಏನೇ ಪ್ರಯತ್ನ ಪಟ್ಟರೂ ಅದು ಅ ಪುಸ್ತಕಕ್ಕೆ ಸರಿ ಹೊಂದುತಿರಲಿಲ್ಲ . ಏಕೆಂದರೆ ಅದು ಅಪ್ಪನ ಬೈಂಡ್ ಕಿನ್ನ ದೊಡ್ಡದಾಗಿತ್ತು .  ಆಗಲೇ ತಿಳಿದಿದ್ದು ಅಪ್ಪನ ರೆಡಿಮೇಡ್ ಬೈಂಡ್ ನ ಮಹಿಮೆ ..:) . ಅವರು ಬೈಂಡ್ ರೆಡಿ ಮಾಡಲು ಆರಿಸಿ ಕೊಂಡಿದ್ದು ದೊಡ್ಡ ಪುಸ್ತಕದ ಬದಲು ಸಣ್ಣ ಪುಸ್ತಕವನ್ನ  !!!!! .