ಒಂದು ದಿನ ಎಂದಿನಂತೆ ಅಪ್ಪ ಊಟಕ್ಕೆ ಹೊರಡುವ ಸಮಯ. ಆಗ ಒಬ್ಬ ವ್ಯಕ್ತಿ(ಹುಡುಗ) ಬಂದು ನಾನು ಅರವಿಂದನ್ನ ಫ್ರೆಂಡ್ ಅವರ ಮನೆಗೆ ಹೋಗಬೇಕಿತ್ತು ಇಲ್ಲಿ ಕೇಳಿದರೆ ಹೇಳುತಾರೆ ಅಂದಿದ್ದ ಎಂದು ಅಪ್ಪನ ಕೇಳಿದ .ಅಷ್ಟಕ್ಕೆ ಅಪ್ಪ ಸರಿ ಬನ್ನಿ ಹೋಗೋಣ ಅವನು ನನ್ನ ಮಗನೆ ಎಂದು ಸೀದ ಮನೆಗೆ ಕರೆದುಕೊಂಡು ಬಂದ . ಆಗ ಅಣ್ಣ ಮನೆಯಲಿರಲಿಲ್ಲ . ಹೇಗೂ ಊಟದ ಸಮಯವಾದ್ದರಿಂದ ಅಮ್ಮ ಊಟ ಮುಗಿಸಿ ಅವನು ಬರುವುದು ಸ್ವಲ್ಪ ಸಮಯವಾಗುತ್ತದೆ ಹೇಳಿ ಊಟ ಬಡಿಸಿದಳು . ನಂತರ ವಾಡಿಕೆಯಂತೆ ಮಲಗಲು ಅಪ್ಪ ಹಾಸಿ ಕೊಟ್ಟ . ಅದರೂ ಅವನಿಗೆ ಗೆಳಯನ ನೋಡುವ ತವಕ , ಹಾಗಾಗಿ ಮಲಗಲಿಲ್ಲ. ಅವನು ಮಲಗದೇ ಅಪ್ಪ ಸಹ ಮಲಗುವ ಹಾಗಿಲ್ಲ ( ನಮ್ಮ ಕಡೆ ಅತಿಥಿ ಸತ್ಕಾರಕ್ಕೆ ತುಂಬ ಪ್ರಾಮುಖ್ಯತೆ ಇದೆ ). ಅದ್ದರಿಂದ ಅನಿವಾರ್ಯವಾಗಿ ಅಪ್ಪ ಅವನ ಹತ್ತಿರ ಮಾತು ಆಡುತ್ತ ಕುಳಿತ . ಸರಿ ಹೀಗೆ ಮಾತಾಡುತ್ತ ಕುಳಿತಿರಬೇಕಾದರೆ ಅಣ್ಣ ಮನೆಗೆ ಬಂದ . ಬಂದವನು ಗೆಳೆಯನ ಮಾತನಾಡಿಸುವುದು ಹಾಗಿರಲಿ ಒಂದು ನಗುವನ್ನು ಸಹ ಬೀರದೆ ಸೀದಾ ಒಳಗೆ ಬಂದ.ಗಳೆಯನನ್ನು ನೋಡಲು ಅಷ್ಟು ಕಾತುರನಗಿದ್ದ ಅ ವ್ಯಕ್ತಿ ಸಹ ಯಾವುದೇ ತರನಾದ ಅಭಿವ್ಯಕ್ತಿ ಪ್ರಕಟಿಸಲಿಲ್ಲ. ನಮಗೆಲ್ಲ ಒಳಗೊಳಗೆ ಏನೋ ಒಂಥರಾ ,ಇವರು ಯಾಕೆ ಹೀಗೆ ಮಾಡುತ್ತಿದಾರೆಂದು . ಅದರೂ ಯಾರು ಏನು ಕೇಳಲಿಲ್ಲ . ಸರಿ ಹೀಗೆ ಒಳಗೆ ಬಂದವನೇ ಕೈಕಾಲು ತೊಳೆದು ಊಟಕ್ಕೆ ಕುಳಿತ . ಅಮ್ಮ ಊಟ ಬಡಿಸುವಾಗ ಅವನೇ ಅಲ್ಲಿ ಹೊರಗೆ ಕುಳಿತ್ತಿದವರು ಯಾರು ಎಂದು ಕೇಳಿದ . ಅಮ್ಮನಿಗೆ ಫುಲ್ ಶಾಕ್ !!!!. ಅವನು ನಿನ್ನ ಗೆಳೆಯನಂತೆ ಅಂಗಡಿಗೆ ಬಂದು ಕೇಳಿದನಂತೆ ಅದಕಾಗಿ ಅಪ್ಪ ಮನೆಗೆ ಕರೆದುಕೊಂಡು ಬಂದರು ಹೇಳಿದಳು .ಈಗ ಶಾಕ್ ಅಣ್ಣನಿಗೆ !!!!!. ನಂತರ ಇಲ್ಲಿ ಏನೋ ಎಡವಟ್ಟಾಗಿದೆ ಎಂಬುದು ಖಾತ್ರಿ ಆಯಿತು . ನಂತರ ಅಪ್ಪನನ್ನು ಒಳಗೆ ಕರೆದು ಅವ ಏನು ಕೇಳಿದ ನೀನು ಯಾಕೆ ಇಲ್ಲಿಗೆ ಕರೆದುಕೊಂಡು ಬಂದೆ ಅವನ ಪರಿಚಯ ಅಣ್ಣನಿಗಿಲ್ಲ ಹೇಳಿದಾಗ ನೀವು ಊಹಿಸಿದಂತೆ ಶೋಕ್ಕ್ನ ಸರದಿ ಅಪ್ಪನದು!!!!. ಅಪ್ಪನ ಗಡಿಬಿಡಿಯ ಪರಿಚಯವಿದ್ದ ನಾವು ಈಗ ಎಡವಿದ್ದೆಲ್ಲಿ ಎಂದು ನೋಡಲೆಬೇಕಲ್ಲ ,ಆದುದರಿಂದ ಅತಿಥಿಯನ್ನೇ ಕೇಳದೆ ಬೇರೆ ದಾರಿ ಇಲ್ಲ . ಸರಿ ಅವನನ್ನೇ ವಿಚಾರಿಸುವ ಎಂದು ಹೊರಗೆ ಬಂದಾಯಿತು. ಅವನಿಂದ ವಿಷಯ ತಿಳಿದಾಗ ನಗುವ ಸರದಿ ಎಲ್ಲರದಾಯಿತು !!!!. ಅವನು ಕೇಳಿದ್ದು ಹತ್ತಿರದ ಹಳ್ಳಿಯ ಅರವಿಂದನನ್ನು (ಅವರು ನಮ್ಮ ಅಂಗಡಿ ಗಿರಾಕಿಯೇ ಆಗಿದ್ದರಿಂದ ಮೇಲೆ ಹೇಳಿದಂತೆ ನಮ್ಮ ಅಂಗಡಿಯಲ್ಲಿ ವಿಳಾಸ ಮತ್ತು ಬಸ್ ಬಗ್ಗೆ ಕೇಳಲು ಹೇಳಿದ್ದರು ). ನಮ್ಮ ಅಪ್ಪ ಗಡಿಬಿಡಿಯಿಂದ ಪೂರ್ತಿ ಕೇಳದೆ ಹೆಸರನ್ನು ಹೇಳಿದ ತಕ್ಷಣ ನನ್ನ ಮಗನ ಗೆಳೆಯನೆಂದೆ ತೀರ್ಮಾನಿಸಿ ಅವನನ್ನು ನಮ್ಮ ಮನೆಗೆ ಕರೆದುಕೊಂಡು ಬಂದಿದ್ದರು . !!!!!
No comments:
Post a Comment