ನನ್ನ ಹಾಗು ಅಪ್ಪನ ಸಂಬಂಧ ಒಂದು ಆತ್ಮೀಯ ಮಿತ್ರ ಸಂಬಂಧ. ಮೊದಲಿನಿಂದಲೂ ಅಪ್ಪನಿಗೆ ಓದು ಬರಹ ಅಂದರೆ ಬಹಳ ಪ್ರೀತಿ. ಆದರೆ ಮನೆ ಪರಿಸ್ಥಿತಿ ಸರಿ ಇಲ್ಲದ ಕಾರಣ ಅವರಿಗೆ ಹೆಚ್ಚು ಓದಲಾಗಲಿಲ್ಲ .
ಅದರೂ ಖಾಸಗಿಯಲ್ಲಿಯೇ ಕಲಿತು ಸಿಕ್ಕಿದ ಕಾಲೇಜ್ ಪ್ರಾಧ್ಯಾಪಕ ಹುದ್ದೆಯನ್ನು ಸಹ ಮನೆಯನ್ನು ಮುನ್ನೆಡೆಸುವ ಸಲುವಾಗಿ ಬಿಟ್ಟಂತ ಮಹಾಪುರುಷ . ಇಂತಹ ಅಪ್ಪ ನಾನು ಶಾಲೆಗೆ ಸೇರಿದಾಗ ಪಟ್ಟ ಸಂತೋಷ ಅಷ್ಟಿಷ್ಟು ಅಲ್ಲ. ನನ್ನ ಜೊತೆ ಶಾಲೆಗೆ ಬಂದು ಒಂದು ವಾರ ನನ್ನ ಜೊತೆಗೆ ಕುಳಿತು ನನಗೆ ಶಾಲೆಗೆ ಹೋಗಲು ಅಭ್ಯಾಸ ಮಾಡಿಸಿದಂಥ ಪುಣ್ಯಾತ್ಮ . ಹೀಗೆ ನಾನು ಶಾಲೆಗೆ ಹೋಗಲು ಪ್ರಾರಂಬಿಸಿದ ನಂತರ ನನ್ನ ಪಾಟಿಚೀಲ ಪುಸ್ತಕ ಪೆನ್ ಪೆನ್ಸಿಲ್,ಗ್ ಹೀಗೆ ಎಲ್ಲವನ್ನೂ ತಂದು ಕೊಟ್ಟು ನನ್ನ ವಿಧ್ಯಾಭ್ಯಾಸಕ್ಕೆ ಎಲ್ಲೂ ಚ್ಯುತಿ ಬರದಂತೆ ಇಂಜಿನಿಯರಿಂಗ್ ತನಕ ನೋಡಿಕೊಂಡ ಅಪ್ಪನ ಬಗ್ಗೆ ನನಗೆ ಎಷ್ಟು ಹೇಳಿದರು ಕಮ್ಮಿಯೆ..
ಇಂತಹ ಅಪ್ಪ ಬಹಳ ಕ್ರಿಯಾತ್ಮಕ ವ್ಯಕ್ತಿ ಕೂಡ . ಏನೇ ಕೆಲಸ ಮಾಡುವಾಗಲು ಏನಾದರೂ ಹೊಸತನ್ನು ಹುಡುಕುವ ವಿಜ್ನ್ಯಾನಿ . ಒಮ್ಮೆ ನನಗೆ ಪುಸ್ತಕಕ್ಕೆ ಬೈಂಡ್ ಹಾಕಲು ಮಾಡಿದ ಹೊಸ ಪ್ರಯೋಗವೇ ರೆಡಿಮೇಡ್ ಬೈಂಡ್ . ಆಗ ನಾನು ೩ ನೆ ತರಗತಿಯಲ್ಲಿದ್ದೆ . ನಾವು ಇದ್ದಿದ್ದು ಹಳ್ಳಿಯಲ್ಲಿ ,ಹಾಗು ಎಲ್ಲಿ ಓದಿದರೂ ಬುದ್ದಿ ಇರುವವರು ಮುಂದೆ ಬಂದೆ ಬರುತ್ತಾರೆಂಬ ನಂಬಿಕೆ ಮತ್ತು ಪೇಟೆಗೆ ದಿನ ಕರೆದುಕೊಂಡು ಹೋಗಿ ಬರುವ ಅನನುಕೂಲತೆ ಇವೆಲ್ಲದರಿಂದ ನಾನು ಓದಿದ್ದು ಸರ್ಕಾರಿ ಶಾಲೆಯಲ್ಲಿ . ಅ ವರ್ಷದಿಂದ ನಮಗೆ ಬೇರೆ ಬೇರೆ ವಿಷಯಗಳ ಪುಸ್ತಕಗಳು ಅಲ್ಲಿವರೆಗೂ ಬರಿ ಒಂದೇ ಪುಸ್ತಕ (ಈಗಿನವರಿಗೆ ಕೇಳಿದರೆ ಬರಿ ಆಶ್ಚರ್ಯವಲ್ಲ ಪರಮಾಶ್ಚರ್ಯವೇ ಆಗುತ್ತದೆ,ನನ್ನ ಅಣ್ಣ ನ ಮಗನಿಗೆ L Kg ಗೆ ೧೦ ಪುಸ್ತಕ!!! )ನನಗೋ ಓದುವ ಹುಚ್ಚು ಬಹಳ ಇದ್ದ ಕಾರಣ ತುಂಬಾ ಸಂತೋಷ ,ಜೊತೆಗೆ ಭಯ ( ಅ ವರ್ಷದಿಂದಷ್ಟೇ ನಮಿಗೆ ಪರೀಕ್ಷೆ ಅಲ್ಲಿವರೆಗೂ ಸುಮ್ಮನೆ ಶಾಲೆ ಗೆ ಹೋಗುವದು ಬರುವದು) . ಅದರೂ ಈಗ ನನಗು ಪೇಟೆ ಶಾಲೆಯವರಂತೆ ತುಂಬ ಪುಸ್ತಕ ಇದೆ ಎಂಬ ಹೆಮ್ಮೆ. ಈಗ ಶುರು ನಮ್ಮಪ್ಪನ ಕೆಲಸ. ಪುಸ್ತಕ ತರುವುದು ನೋಟ್ಬುಕ್ ತರುವುದು (ಅ ವರ್ಷದಿಂದನೆ ನಮಿಗೆ ನೋಟ್ಬುಕ್ ನಲ್ಲಿ ಬರೆಯಲು ಪ್ರಾರಂಭ ಅಲ್ಲಿವರೆಗೂ ಬರಿ ಸ್ಲೇಟು ). ಅದಿಕಾಗಿ ಶಾಲೆ ಪ್ರಾರಂಭ ಆಗುವ ಮೊದಲೆ ಅಪ್ಪ ನನ್ನ ಒಬ್ಬರು ಗುರುಗಳನ್ನು ಕೇಳಿಕೊಂಡು ಯಾವ ಯಾವ ಪುಸ್ತಕ ಎಷ್ಟು ನೋಟ್ಬುಕ್ ಬೇಕು ಎಲ್ಲ ತಂದರು . ಜ಼ೊತೆಗೆ ಆಗ ಮೌಗ್ಲಿ ಬೈಂಡ್ ಬಹಳ ಖ್ಯಾತಿ ಪಡೆದಿತ್ತು ಎಂಬುದನ್ನು ನನ್ನ ಪೇಟೆ ಮಿತ್ರರಿಂದ ತಿಳಿದುಕೊಂಡಿದ್ದೆ . ಅದಕಾಗಿ ನಾನು ಕೂಡ ನನಗು ಅದೇ ಬೇಕು ಹೇಳಿ ಅದನ್ನೂ ತರಿಸಿಕೊಂಡೆ . ಸರಿ ಪುಸ್ತಕ,ನೋಟ್ಬುಕ್ ಬೈಂಡ್ ಎಲ್ಲ ಬಂದಾಯಿತು ಈಗ ಪುಸ್ತಕಕ್ಕೆ ಬೈಂಡ್ ಮಾಡುವ ಕೆಲಸ . ಅಲ್ಲಿರುವ ಬಂಡಿಗಟ್ಟಲೆ ಪುಸ್ತಕ ನೋಟ್ಬುಕ್ ನೋಡಿ ,ನಾನು ಮೊದಲೇ ಹೇಳಿದಂತೆ ನಮ್ಮಪ್ಪನ ಕ್ರಿಯಾತ್ಮಕ ತಲೆಗೆ ಹೊಸ ಐಡಿಯಾ ಹೊಳೆಯಿತು . !!! . ಎಲ್ಲದನ್ನು ಒಂದೊಂದಾಗೆ ಮಾಡುತ್ತ ಕುಳಿತರೆ ದಿನವೆಲ್ಲ ಇದಕ್ಕೆ ಬೇಕು ಎಂದು ಯೋಚಿಸಿ ರೆಡಿಮೇಡ್ ಬೈಂಡ್ ಮಾಡುವ ಅಭಿಪ್ರಾಯಕ್ಕೆ ಬಂದರು . ಅದೇನೆಂದರೆ ಒಂದು ಪುಸ್ತಕ ತೆಗೆದುಕೊಂಡು ಅದರ ಅಳತೆಗೆ ಸರಿ ಹೊಂದುವಂತೆ ಎಲ್ಲ ಬೈಂಡ್ ಗಳನ್ನೂ ಒಟ್ಟಿಗೆ ಇಟ್ಟು ಕತ್ತರಿಸುವುದು . ನಂತರ ಸಣ್ಣ ಮಾಡುವುದಿದ್ದರೆ ಮಾಡುವುದು .ಇದು ನಿಜವಾಗಲು ಒಳ್ಳೆ ಐಡಿಯಾ ವೆ . ಸೊ ಒಂದು ಪುಸ್ತಕ ತೆಗೆದುಕೊಂಡು ಅದರ ಅಳತೆಗೆ ಎಲ್ಲ ಬೈಂಡ್ ಗಳನ್ನೂ ಕತ್ತರಿಸಿ ಅಪ್ಪನ ರೆಡಿಮೇಡ್ ಬೈಂಡ್ ತಯಾರಾಯಿತು . ಈಗ ಎಲ್ಲ ಪುಸ್ಥಕಕ್ಕು ಹಾಕುವ ಸರದಿ . ಸೊ ಅಪ್ಪ ಇನ್ನೊಂದು ಪುಸ್ತಕ ತೆಗೆದುಕೊಂಡರು .ನಂತರ ಜೋರಾಗಿ ನಗಲು ಪ್ರಾರಂಬಿಸಿದರು. ನನಗೆ ಏನು ಅರ್ಥವಾಗದೇ ಕಣ್ಣು ಕಣ್ಣು ಬಿಟ್ಟು ನೋಡುತಿದ್ದೆ. ನಂತರ ತಿಳಿಯಿತು ಅವರ ನಗುವಿಗೆ ಕಾರಣ . ಅವರು ಏನೇ ಪ್ರಯತ್ನ ಪಟ್ಟರೂ ಅದು ಅ ಪುಸ್ತಕಕ್ಕೆ ಸರಿ ಹೊಂದುತಿರಲಿಲ್ಲ . ಏಕೆಂದರೆ ಅದು ಅಪ್ಪನ ಬೈಂಡ್ ಕಿನ್ನ ದೊಡ್ಡದಾಗಿತ್ತು . ಆಗಲೇ ತಿಳಿದಿದ್ದು ಅಪ್ಪನ ರೆಡಿಮೇಡ್ ಬೈಂಡ್ ನ ಮಹಿಮೆ ..:) . ಅವರು ಬೈಂಡ್ ರೆಡಿ ಮಾಡಲು ಆರಿಸಿ ಕೊಂಡಿದ್ದು ದೊಡ್ಡ ಪುಸ್ತಕದ ಬದಲು ಸಣ್ಣ ಪುಸ್ತಕವನ್ನ !!!!! .
No comments:
Post a Comment